ಭಾರತದ 20 ಸೈನಿಕರನ್ನ ಚೀನಾ ಹತ್ಯೆಗೈದಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಹಿಂದೆ ಕಳೆದ ರಾತ್ರಿ ನಡೆದ ಸೇನಾ ಚಟುವಟಿಕೆಯಲ್ಲಿ ಗ್ವಾಲನ್ ಕಣಿವೆಯಲ್ಲಿ 3 ಮಂದಿ ಭಾರತೀಯ ಸೈನಿಕರು ಹುತಾತ್ಮರಾಗಿದ್ದರು ಎಂಬ ಸುದ್ದಿ ಇತ್ತು. ಇನ್ನು ಭಾರತದ ಪ್ರತಿದಾಳಿಗೆ 5 ಮಂದಿ ಚೀನಾ ಸೈನಿಕರು ಹತರಾಗಿದ್ದಾರೆ ಎಂಬ ಸುದ್ದಿ ಇತ್ತು. ಇದೀಗ ಚೀನಾ ದಾಳಿ ಮುಂದುವರೆಸಿದ್ದು ಭಾರತದ 20 ಸೈನಿಕರು ಹುತಾತ್ಮರಾಗಿದ್ದು ಈ ಸಂಖ್ಯೆ ಇನ್ನೂ ಏರಿಕೆಯಾಗೋ ಸಾಧ್ಯತೆ ಇದೆ ಎನ್ನಲಾಗಿದೆ. ಪೂರ್ವ ಲಡಾಖ್ ನಲ್ಲಿ ಅಪಾರ ಪ್ರಮಾಣದ ಸೇನೆ ಜಮಾವಣೆ ಮಾಡಿ ಭಾರತವನ್ನ ಹೆದರಿಸುವ ಯತ್ನ ಮಾಡ್ತಿದ್ದ ಚೀನಾ ಈಗ ದಾಳಿ ಮುಂದುವರೆಸಿ ಉದ್ಧಟತನ ತೋರಿದೆ.


ಗ್ವಾಲಾನ್ ಕಣಿವೆಯಲ್ಲಿ ಚೀನಾ ಸೈನಿಕರು ಅಕ್ರಮವಾಗಿ ಭಾರತದ ಗಡಿ ಪ್ರವೇಶ ಮಾಡಿದ್ದಲ್ಲದೇ ಗಡಿಯಲ್ಲಿ ಅಪಾರ ಪ್ರಮಾಣದ ಸೇನಾ ಜಮಾವಣೆಯನ್ನೂ ಮಾಡಿತ್ತು. ಕಳೆದ ರಾತ್ರಿ ಭಾರತೀಯ ಯೋಧರು ಚೀನಾ ಸೈನಿಕರನ್ನ ಹೊರಗಟ್ಟಲು ಮುಂದಾದಾಗ ತಳ್ಳಾಟ ನೂಕಾಟ ಏರ್ಪಟ್ಟಿತ್ತು. ಭಾರತದ ನೆಲಬಿಟ್ಟು ಹಿಂದೆಸರಿಯುವಂತೆ ಚೀನಾ ಸೈನಿಕರಿಗೆ ಭಾರತೀಯ ಸೈನಿಕರು ಎಚ್ಚರಿಕೆ ಕೊಟ್ರೂ ಚೀನಾ ಸೈನಿಕರು ಉದ್ದಟತನ ತೋರಿದ್ದರು ಇದರಿಂದ ಉಂಟಾದ ಘರ್ಷಣೆಯಲ್ಲಿ ಮೂವರು ಭಾರತೀಯ ಸೈನಿಕರು ಹುತಾತ್ಮರಾದ್ರೆ ಅತ್ತ 5 ಮಂದಿ ಚೀನಾ ಸೈನಿಕರು ಹತರಾಗಿದ್ದರು ಎಂದು ವರದಿಯಾಗಿತ್ತು. ಈ ಸಬಂಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಧಾನಿ ಜೊತೆ ಚರ್ಚಿಸಿದ್ದರು. ಇದಾಗ್ತಿದ್ದಂತೆ ಭಾರತೀಯ ಸೈನಿಕರು ಹುತಾತ್ಮರಾದ ಸಂಖ್ಯೆ 20ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ಸದ್ಯ ಭಾರತ ಮತ್ತು ಚೀನಾ ನಡುವೆ ಗಡಿ ವಿವಾದ ಉಲ್ಬಣಿಸಿದ್ದು ಉಬಯ ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಯಾವ ಕ್ಷಣದಲ್ಲೂ ಪರಿಸ್ಥಿತಿ ಕೈಮೀರೋ ಹಂತ ತಲುಪಿದೆ.