ಹೈದರಾಬಾದ್: ಟಾಲಿವುಡ್ ಬ್ಯೂಟಿ ಸಮಂತಾ ಅಕ್ಕಿನೇನಿ ಸೌತ್ ಸಿನಿಮಾ ಇಂಡಸ್ಟ್ರಿಯ ನಟಿಯರಲ್ಲೇ ಟಾಪ್ನಲ್ಲಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಒಂದು ಮಾತಿದೆ ಮದುವೆಯಾಗ್ತಿದ್ದಂತೆ ಮತ್ತೆ ಸಿನಿಮಾ ಬಾಗಿಲು ಮುಚ್ಚಿದಂತೆ ಅಂತ. ಆದ್ರೆ ಸಮಂತಾ ಮಾತ್ರ ಇದಕ್ಕೆ ಅಪವಾದ. ಕಾರಣ ಮದುವೆ ಆದ ಬಳಿಕ ಸಿನಿಮಾ ಅವಕಾಶ ಕಡಿಮೆಯಾಗೋ ಬದಲಿಗೆ ಮೇಲಿಂದ ಮೇಲೆ ಸಿನಿಮಾಗಳು ಸಮಂತಾ ಹುಡುಕಿಕೊಂಡು ಬರ್ತಿದೆ. ಆದ್ರೆ ಅಕ್ಕಿನೇನಿ ಕೈ ಹಿಡಿದಿರೋ ಸಮಂತಾ ಈಗ ಮಗುವಿನ ಬಗ್ಗೆ ಅಚ್ಚರಿಯ ಹೇಳಿಕೆಕೊಟ್ಟು ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದ್ದಾರೆ.


ಮಗು ಯಾವಾಗ? ನೀವು ಪ್ರಗ್ನೆಂಟ್ ಅಂತೆ ಹೌದಾ ? ಈ ತರಹದ ಪ್ರಶ್ನೆಗಳು ಸಮಂತಾಗೆ ಮದುವೆಆದ ಬಳಿಕ ಎದುರಾಗುತ್ತಲೇ ಇದೆ. ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ಪ್ರಶ್ನೆಗಳಿಗೆ ನಾನು ಉತ್ತರಿಸಲಿದ್ದೇನೆ. ಎಂದು ಸಮಂತಾ ಹೇಳಿದ್ದರು. ಏನೇ ಪ್ರಶ್ನೆ ಕೇಳಿದ್ರೂ ನಾನು ಉತ್ತರಿಸುವೆ ಎಂದಿದ್ರು. ಇದನ್ನೇ ಬಂಡವಾಳ ಮಾಡಿಕೊಂಡ ಸಮಂತಾ ಅಭಿಮಾನಿಯೊಬ್ಬ ನೀವು ಪ್ರಗ್ನೆಂಟ್ ಅಂತೆ ಹೌದಾ ಎಂದು ಪ್ರಶ್ನೆ ಕೇಳಿದ್ದ. ಇದಕ್ಕೆ ಉತ್ತರಿಸಿರೋ ಸಮಂತಾ ‘ನಾನು 2017ರಿಂದಲೇ ಗರ್ಭಿಣಿಯಾಗಿದ್ದೇನೆ. ನನಗನಿಸುತ್ತೆ ಹೊಟ್ಟೆಯಲ್ಲಿರೋ ಮಗುವಿಗೆ ಹೊರಬರಲು ಯಾಕೋ ಇಷ್ಟವಿಲ್ಲ ಎಂಬಂತೆ ಕಾಣ್ತಿದೆ’ ಎಂದು ನಗೆ ಚಟಾಕಿ ಹಾರಿಸಿದ್ದಾರೆ. ಸಮಂತಾ ಹೀಗೆ ಹೇಳಲು ಕಾರಣ 2017ರ ಅಕ್ಟೋಬರ್ನಲ್ಲಿಯೇ ಸಮಂತಾ ಮತ್ತು ನಾಗಚೈತನ್ಯ ಮದುವೆಯಾಗಿತ್ತು. ಅಂದಿನಿಂದ ಸಮಂತಾ ಗರ್ಭಿಣಿ ಎಂಬ ಸುದ್ದಿ ಆವಾಗಆವಾಗ ಕೇಳಿಬರ್ತಲೇ ಇದೆ. ಹೀಗಾಗಿ ಈಗ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿ ಕೇಳಿದ ಪ್ರಶ್ನೆಗೆ ಸಮಂತಾ ಈರೀತಿ ಉತ್ತರಿಸಿದ್ದಾರೆ ಅಷ್ಟೇ.