ನವದೆಹಲಿ- ಕೊರೊನಾ ವೈರಸ್ ದೇಶದಲ್ಲಿ ತನ್ನ ಪಾರಮ್ಯವನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ದಿನದಿಂದ ದಿನಕ್ಕೆ ಪಾಸಿಟಿವ್ ಕೇಸ್ ಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ನಡುವೆ ಒಂದು ನಿಟ್ಟುಸಿರು ಬಿಡುವ ಅಥವಾ ಕೊರೊನಾ ಭಯದ ನಡುವೆಯೂ ಸಮಾಧಾನ ತರುವ ಬೆಳವಣಿಗೆಯೂ ದೇಶದಲ್ಲಿ ನಡೆದಿದೆ. ಪಾಸಿಟಿವ್ ಕೇಸ್ ಗಳ ಏರಿಕೆಯ ನಡುವೆ ಮರಣ ಪ್ರಮಾಣ ನಿರಂತರವಾಗಿ ಇಳಿಕೆಯಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.
ಮೇ ತಿಂಗಳಲ್ಲಿ ಕೊರೊನಾದ ಮರಣ ಪ್ರಮಾಣ ಶೇಕಡಾ 3.2 ರಷ್ಟಿತ್ತು. ಈಗ ಅದು 2.38ಕ್ಕೆ ಇಳಿದಿದೆ. ಮೇಯಿಂದ ಜುಲೈವರಿಗೆ ಲೆಕ್ಕಾಚಾರವನ್ನು ನೋಡುವುದಾದರೇ ಶೇಕಡಾ 3.20 ಯಿಂದ 2.72, 2.49 ನಂಚರ ಈ 2.38ಕ್ಕೆ ಇಳಿದಿರುವುದು, ಕೊರೊನಾದ ಬಗ್ಗೆ ಇರುವ ಭಯವನ್ನು ಸ್ವಲ್ಪನಾದರೂ ದೂರ ಮಾಡಬಹುದು.

ಗುಣಮುಖರಾದವರ ಸಂಖ್ಯೆಯಲ್ಲೂ ಏರಿಕೆ
ಶೇಕಡಾ 63.53ರಷ್ಟು ಗುಣಮುಖರಾಗಿದ್ದಾರೆ
ಭಾರತದಲ್ಲಿ 48916 ಹೊಸ ಕೇಸ್ ಗಳು ದಾಖಲಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಪಾಸಿಟಿವ್ ಕೇಸ್ ಗಳ ಸಂಖ್ಯೆ 13,36,861. ಇವುಗಳಲ್ಲಿ 31,358 ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ, ಭಾರತದಲ್ಲಿ ಗುಣಮುಖರಾದವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ವರೆಗೆ ಶೇಕಡಾ 63.53ರಷ್ಟು ಜನರು ಗುಣಮುಖರಾಗಿದ್ದಾರೆ.

ಶುಕ್ರವಾರ ಒಂದೇ ದಿನ ಭಾರತದಲ್ಲಿ 4,20,898 ಜನರನ್ನು ಪರೀಕ್ಷೆಯೂ ಮಾಡಲಾಗಿದೆ. ಇದು ಕೂಡ ದೇಶದಲ್ಲಿ ಆಗಿರುವ ಹೊಸ ದಾಖಲೆಯಾಗಿದೆ.