ನವದೆಹಲಿ-ಕೊರೊನಾದ ಹಾವಳಿ ಆರಂಭ ಆದಾಗಿನಿಂದ ಇಲ್ಲಿಯವರೆಗೆ ಮಾಸ್ಕ್ ಹಾಕಿಕೊಳ್ಳಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅನ್ನುವ ಮಾತುಗಳನ್ನು ಕೇಳುತ್ತಲೇ ಇದ್ದೇವೆ. ಇದರ ಜೊತೆ ಜೊತೆಗೆ ಕೊರೊನಾದಿಂದ ದೂರವಿರಲು ಎನ್ 95 ಮಾಸ್ಕ್ ಬಳಸಿ ಅನ್ನುವ ಮಾತು ಚಾಲ್ತಿಗೆ ಬಂತು. ಆದರೆ ಈಗ ಎನ್ 95 ಮಾಸ್ಕ್ ಬಳಕೆದಾರರಿಗೂ ಶಾಕ್ ಆಗುವಂತಹ ಸುದ್ದಿಯೊಂದು ಹೊರಬಿದ್ದಿದೆ.
N 95 ಮಾಸ್ಕ್ ನಿಂದಲೂ ಬರುತ್ತಂತೆ ಕೊರೊನಾ!
ಮಾಸ್ಕ್ ನಲ್ಲಿ ರಂದ್ರಗಳು ಇರಬಾರದು, ಎನ್ 95 ಮಾಸ್ಕ್ ನಿಂದಲೂ ಕೂಡ ಕೊರೊನಾ ತಡೆಗಟ್ಟಲು ಸಾಧ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಸಿದೆ. ಆರೋಗ್ಯ ಇಲಾಖೆಯ ಡೈರೆಕ್ಟರ್ ಜನರಲ್ ಆಗಿರುವ ರಾಜೀವ್ ಗರ್ಗ್ ಅವರು ಎನ್ 95 ಮಾಸ್ಕ್ ಬಳಕೆ ಮಾಡದಿರುವಂತೆ ಎಲ್ಲಾ ರಾಜ್ಯಗಳಿಗೂ ಕೂಡ ಪತ್ರಬರೆದಿದ್ದಾರೆ. ಈ ಮೂಲಕ ಈವರೆಗೆ ಜನರು ಅಪಾರವಾಗಿ ನಂಬಿಕೊಂಡಿದ್ದ ಎನ್ 95 ಮಾಸ್ಕ್ ಕೂಡ ಸೇಫ್ ಅಲ್ಲ ಅನ್ನುವುದು ಬಯಲಾಗಿದೆ.
ಮನೆಯಲ್ಲೇ ತಯಾರಿಸಿದ ಬಟ್ಟೆಯ ಮಾಸ್ಕ್ ಗಳೇ ಸೋಂಕನ್ನು ತಡೆಯುವ ಶಕ್ತಿ ಹೊಂದಿವೆ.ಯಾಕಂದ್ರೆ ಈ ಮಾಸ್ಕ್ ಗಳನ್ನು ತೊಳೆದು ಮತ್ತೆ ಉಪಯೋಗಿಸಬಹುದು, ತೊಳೆದು ಉಪಯೋಗಿಸುವ ಮಾಸ್ಕ್ ಗಳೇ ಉತ್ತಮವೆಂದು ಗರ್ಗ್ ಅಭಿಪ್ರಾಯಪಟ್ಟಿದ್ದಾರೆ.