ಮುಂಬೈ: ಕೆಲವು ದಿನಗಳ ಹಿಂದೆ ಪಿಪಿಇ ಕಿಟ್ ಧರಿಸಿದ್ದ ಓರ್ವ ಮಹಿಳೆ ಬಾಲಿವುಡ್ ಸಾಂಗ್ ಒಂದಕ್ಕೆ ಸಖತ್ ಸ್ಟೆಪ್ಸ್ ಹಾಕಿದ ವೀಡಿಯೋ ಭಾರಿ ಸದ್ದು ಮಾಡಿತ್ತು. ಕೊರೋನಾ ಪೇಷಂಟ್ ವಾರ್ಡ್ ನಲ್ಲೇ ಪಿಪಿಇ ಕಿಟ್ ಧರಿಸಿದ್ದ ವೈದ್ಯೆ ಓರ್ವಳು ಮಾಡಿದ ಡ್ಯಾನ್ಸ್ ಇದಾಗಿತ್ತು. ಹಾಯ್ ಗರಮಿ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದ ಈ ಲೇಡಿ ಡಾಕ್ಟರ್ ಯಾರು ಎಂದು ದೇಶದ ಜನ ತಲೆಕೆಡಿಸಿಕೊಂಡಿದ್ರು. ಆಕೆಯನ್ನ ಹುಡುಕೋಕೆ ಫೇಸ್ಬುಕ್, ಇನ್ಸ್ಟಾಗ್ರಾಮ್, ಹೀಗೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲೂ ಸರ್ಚ್ ಮಾಡಿದ್ರು. ಕೊನೆಗೆ ಆ ಡಾಕ್ಟರ್ ಯಾರೆಂಬುದು ಪತ್ತೆಯಾಗಿದೆ. ಈ ಲೇಡಿ ಡಾಕ್ಟರ್‌ರನ್ನು ನೋಡಿದ ಹಲವು ಯುವಕರು ಈಗ ಪೇಷಂಟ್ ಆಗಿದ್ದಾರೆ.




ವರುಣ್ ಧವನ್ ಮತ್ತು ನೋರಾ ಫತೇಹ್ ಅಭಿನಯದ ಗರ್ಮಿ ಚಿತ್ರದ ಹಾಡಿಗೆ ಪಿಪಿಇ ಕಿಟ್ ಧರಿಸಿದ್ದ ಡಾಕ್ಟರ್ ಕೊರೋನಾ ಪೇಷಂಟ್ಸ್ ಇದ್ದ ವಾರ್ಡ್ ನಲ್ಲೇ ಭರ್ಜರಿ ಸ್ಟೆಪ್ಸ್ ಹಾಕಿದ್ದರು. ಪಿಪಿಇ ಕಿಟ್ ಧರಿಸಿ ಡ್ಯಾನ್ಸ್ ಮಾಡಿದ್ರಿಂದ ಇದು ದೇಶದಲ್ಲೇ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಒಂದು ವೀಡಿಯೋವನ್ನ ಇನ್ಸ್ಟಾಗ್ರಾಮ್ ಒಂದರಲ್ಲೇ ಬರೊಬ್ಬರಿ 14 ಲಕ್ಷ ಮಂದಿ ನೋಡಿದ್ದಾರೆ. ಇಷ್ಟೊಂದು ಅದ್ಭುತವಾಗಿ ಸ್ಟೆಪ್ ಹಾಕೋ ಡಾಕ್ಟರ್ ಯಾರು. ಪಿಪಿಇ ಕಿಟ್ ಧರಿಸಿಯೇ ಇಷ್ಟೊಂದು ಅದ್ಭುತವಾಗಿ ಡ್ಯಾನ್ಸ್ ಮಾಡೋ ಈಕೆ ನಿಜವಾಗ್ಲೂ ಪ್ರೊಪೆಷನಲ್ ಡ್ಯಾನ್ಸರ್ ಇರಬಹುದು ಎಂದೆಲ್ಲಾ ಜನ ಊಹಿಸಿದ್ರು. ಈಗ ಜನ್ರ ಊಹೆಗೆಲ್ಲಾ ಫುಲಿಸ್ಟಾಪ್ ಬಿದ್ದಿದೆ. ಈ ಯುವ ಡಾಕ್ಟರ್ ಅತಿಲೋಕ ಸುಂದರಿ ಅನ್ನೋದು ಗೊತ್ತಾಗಿದೆ. ಮಾತ್ರವಲ್ಲ ಆಕೆ ಓರ್ವ ಅದ್ಭುತ ಡ್ಯಾನ್ಸರ್ ಅನ್ನೋದು ತಿಳಿದಿದೆ.
ಡಾಕ್ಟರ್ ಈ ಯಾರು?
ಪಿಪಿಇ ಕಿಟ್ ಧರಿಸಿ ಡ್ಯಾನ್ಸ್ ಮಾಡಿದ ಈ ಡಾಕ್ಟರ್ ಮುಂಬೈ ನಿವಾಸಿ. ಈಕೆಯ ಹೆಸರು ರೀಚಾ ನೇಗಿ, ಈಕೆ ನೃತ್ಯಪಟುವಾಗಿದ್ದು ಇನ್ಸ್ಟಾಗ್ರಾಮ್ ನಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾಳೆ. ಈಕೆ ಡಾಕ್ಟರ್ಸ್ ಡೇ ದಿನ ಪಿಪಿಇ ಕಿಟ್ ಧರಿಸಿ ಡ್ಯಾನ್ಸ್ ಮಾಡಿದ್ದಳು. ಇದು ಮಾತ್ರವಲ್ಲ ಈಕೆಯ ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಬೇರೆ ಬೇರೆ ಹಾಡುಗಳಿಗೆ ಹೆಜ್ಜೆಹಾಕಿದ್ದಾಳೆ. ಈಗ ಈಕೆಯನ್ನ ನೋಡಿದ ಅನೇಕ ಪಡ್ಡೆಹುಡುಗರು ತಲೆಕೆಡಿಸಿಕೊಂಡು ಪೇಷಂಟ್ ಆಗಿದ್ದಾರೆ. ಮಾತ್ರವಲ್ಲ ಈಕೆ ಟ್ರೀಟ್ಮೆಂಟ್ ಕೊಟ್ರೆ ವಾಸಿಯಾಗದ ರೋಗವೇ ಇಲ್ಲ ಅಂತ ಹುಡುಗರು ಮಾತಾಡಿಕೊಳ್ತಿದ್ದಾರೆ.




ಇನ್ನು ರಿಚಾ ಸದ್ಯ ಮುಂಬೈನಲ್ಲಿ ನಲೆಸಿದ್ದು ಕೋವಿಡ್ -19 ಹಿನ್ನಲೆ ರೋಗಿಗಳ ಸೇವೆ ಮಾಡ್ತಿದ್ದಾಳೆ. ನಾಸಿಕ್ ನಲ್ಲಿ ವಿದ್ಯಾಭ್ಯಾಸ ಪೂರೈಸಿರೋ ರಿಚಾ ವೃತ್ತಿಗಾಗಿ ವೈದ್ಯಕೀಯ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದು ಆಕೆಗೆ ಮನಸು ಪೂರ್ತಿ ಡ್ಯಾನ್ಸ್ ಮೇಲೆ ಇರೋದು ಆಕೆಯ ಇನ್ಸ್ಟಾಗ್ರಾಮ್ ಫೋಸ್ಟ್‌ನಿಂದ ಗೊತ್ತಾಗುತ್ತೆ.