ದೆಹಲಿ: ವಾಟ್ಸಪ್ ತನ್ನ ಬಳಕೆದಾರರಿಗೆ ಮತ್ತೊಂದು ಭರ್ಜರಿ ಸಿಹಿಸುದ್ದಿ ನೀಡಿದ್ದು, ಇದೀಗ ವಾಟ್ಸಪ್ ಸಂಸ್ಥೆ ಹೊಸ ಫೀಚರ್ ವೊಂದನ್ನು ನೀಡಲು ಸಿದ್ಧತೆ ನಡೆಸಿದೆ.
ವಾಟ್ಸಪ್ ಬಳಕೆದಾರರಿಗೆ ಇದೀಗ ಒಂದೇ ನಂಬರ್ ನ ಮೂಲಕ ಹಲವು ಮೊಬೈಲ್ ಗಳಲ್ಲಿ ವಾಟ್ಸಪ್ ಬಳಸಲು ಅವಕಾಶ ಮಾಡಿಕೊಡುವ ಫೀಚರ್ ಪರಿಚಯಿಸಲು ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ.
ಈ ಹೊಸ ಫೀಚರ್ ಅಂಡ್ರಾಯ್ಡ್ 2.20.196.8 ನ ಬೀಟಾ ವರ್ಷನ್ ನಲ್ಲಿ ಫೀಚರ್ ಕಾಣಿಸುತ್ತಿದೆ. ಲಿಂಕ್ಡ್ ಡಿವೈಸ್ ಎನ್ನುವ ಆಯ್ಕೆ ಮಾಡಿದರೆ ಒಂದೇ ನಂಬರ್ ನ ಮೂಲಕ ಹಲವು ಮೊಬೈಲ್ ಗಳಲ್ಲಿ ವಾಟ್ಸಪ್ ಬಳಸಲು ಅವಕಾಶ ನೀಡಲು ಮುಂದಾಗಿದೆ.